About Me
- BCM hostel chincholi 713
- kalaburagi, karnataka, India
- somalingmuppar kawalga economics
Friday, December 19, 2025
Sunday, November 23, 2025
ಮಾಹಿತಿ ಹಕ್ಕು ಕಾಯ್ದೆ' ನಿಯಮದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ |RTI Act
ಮಾಹಿತಿ ಹಕ್ಕು ಕಾಯ್ದೆ' ನಿಯಮದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ |RTI Act
ಕಲಂ(ಎಫ್)
“ಮಾಹಿತಿ” ಎಂದರೆ ತತ್ಕಾಲದಲ್ಲಿ ಜಾರಿಗಲ್ಲಿರುವ ಯಾವುದೇ ಇತರೆ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳು, ಮೆಮೋಗಳು, ಇ-ಮೇಲ್‌ಗಳ, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳು, ಸುತ್ತೋಲೆಗಳು, ಆದೇಶಗಳು, ಲಾರ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದ ಪತ್ರಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಾಗ್ರಿ.
ಕಲಂ(ಹೆಚ್)
ಸಾರ್ವಜನಿಕ ಪ್ರಾಧಿಕಾರ ಎಂದರೆ,
ಅ) ಸಂವಿಧಾನ ಮೂಲಕ ಅಥವಾ ಅದರ ಅಡಿಯಲ್ಲಿ
ಆ) ಸಂಸತ್ತಿನಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ
ಇ) ರಾಜ್ಯ ವಿಧಾನ ಮಂಡಲದಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ ಸ್ಥಾಪಿತವಾದ ಅಥವಾ ರಚಿತವಾದ ಯಾವುದೇ ಪ್ರಧಾಕಾರ ಅಥವಾ ನಿಕಾಯ ಅಥವಾ ಸ್ವಯಂ ಆಡಳಿತ ಸಂಸ್ಥೆ ಮತ್ತು ಇದು
1) ಸಮುಚಿತ ಸರ್ಕಾರದ ಒಡೆತನಕ್ಕೆ, ನಿಯಂತ್ರಣಕ್ಕೆ ಒಳಪಟ್ಟ ಅಥವಾ ಸರ್ಕಾರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಯಾವುದೇ ನಕಾಯವನ್ನು
2) ಸಮುಚಿತ ಸರ್ಕಾರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಸರ್ಕಾರೇತರ ಸಂಸ್ಥೆಯನ್ನು ಒಳಗೊಳ್ಳುತ್ತದೆ .
ಕಲಂ4(1)(ಎ)
ಕಡತಗಳ ಕ್ರಮಬದ್ದ ಸೂಚಿಪಟ್ಟಿಯನ್ನು ಸಿದ್ಧಪಡಿಸುವುದು ಹಾಗೂ ನಿರ್ವಹಣೆ – ಸದರಿ |ಕಾರ್ಯವನ್ನು 12-10-2005 ರೊಳಗಾಗಿ ಪೂರ್ಣಗೊಳಿಸಿರಬೇಕು.
ಕಲಂ4(1)(ಬಿ)
ಘೋಷಿತ ಪಟ್ಟಿಯ ತಯಾರಿಕೆ- ಸದರಿ 17 ವಿಷಯಗಳನ್ನೊಗೊಂಡಂತೆ ಸ್ವಯಂ ಘೋ ಕಾರ್ಯವನ್ನು 12-10-2005 ರೊಳಗಾಗಿ ಪೂರ್ಣಗೊಳಿಸಿರಬೇಕು.
ಕಲಂ005(1)ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪದನಾಮೀಕರಿಸುವುದು.
ಕಲಂ 5005(2) : ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪದನಾಮೀಕರಿಸುವುದು.
ಕಲಂ5(3) : ಮಾಹಿತಿ ಕೋರುವ ವ್ಯಕ್ತಿಗಳಿಂದ ಬರುವ ಮನವಿಗಳ ಬಗ್ಗೆ ಮಾಹಿತಿ ಕೋರುವ ವ್ಯಕ್ತಿಗಳಿಗೆ ಸೂಕ್ತ ನೆರವು ನೀಡತಕ್ಕದ್ದು.
ಕಲಂ 5(4) : ಸಾ.ಮಾ, ಅ.ಯು ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಅವಶ್ಯಕವೆಂದು ಪರಿಗಣಿಸುವಂತಹ ಯಾರೇ ಇತರ ಅಧಿಕಾರಿಗಳು ನೆರವು ಪಡೆಯುವುದು.
ಕಲಂ 005(5) : ಸಾ.ಮಾ.ಅ.ಗೆ ನೆರವು ನೀಡುವ ಅಧಿಕಾರಿಯನ್ನು ಸಂದರ್ಭನುಸಾರ ಸಾ.ಮಾ.ಅ, ಎಂದು ಪರಿಗಣಿಸುವುದು.
006(1) ಪ್ರಾರಂಭಿಕ ಶುಲ್ಕ ರೂ 10/- ಗಳನ್ನು ಪಾವತಿಸಿ, ಮಾಹಿತಿ ಕೋರಿ ಅರ್ಜಿ ಸಲ್ಲಿಸುವುದು.
ಕಲಂ6(2) ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರನನ್ನು ವೈಯುಕ್ತಿಕ ವಿವರಗಳನ್ನು/ಕಾರಣ ನೀಡುವಂತೆ ಅಗತ್ಯಪಡಿಸತಕ್ಕದ್ದಲ್ಲ.
006(3) ಸಾರ್ವಜನಿಕ ಮಾಹಿತಿ ಅಧಿಕಾರಿಯ ಅರ್ಜಿದಾರರು ಕೋರಿಸುವ ಮಾಹಿತಿ ತನ್ನಲ್ಲಿ ಲಭ್ಯವಿಲ್ಲದಿದ್ದಲ್ಲಿ 5 ದಿನಗಳೊಳಗಾಗಿ ಅರ್ಜಿದಾರರ ಮಾಹಿತಿ ಕೋರಿದೆ ಅರ್ಜಿಯನ್ನು ಅಥವಾ ಸಮುಚಿತವಾದ ಅದರ ಭಾಗವನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸಿ,
ವರ್ಗಾವಣೆಯನ್ನು ಕೊಡಲೆ ಅರ್ಜಿದಾರರಿಗೆ ತಿಳಿಸತಕ್ಕದ್ದು.
30 ದಿನಗಳೊಳಗಾಗಿ ನಿಗದಿಪಡಿಸಬಹುದಾದಂತಹ ಶುಲ್ಕವನ್ನು ಸಂದಾಯ ಮಾಡಿಕ ಮೇಲೆ ಮಾಹಿತಿ ಒದಗಿಸತಕ್ಕದ್ದು. ಮಾಹಿತಿಯು ಒಬ್ಬ ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಲ್ಲಿ ಆ ಮಾಹಿತಿಯ ಕೋರಿಕೆಯನ್ನು ಸ್ವೀಕರಿಸಿದ ನಲವತ್ತೆಂಟು ಗಂಟೆಗಳೊಳಗಾಗಿ ಒದಗಿಸತಕ್ಕದ್ದು.
ಕಲಂ 007(2) ನಿಗದಿಪಡಿಸಿದ ಅವಧಿಯೊಳಗೆ ತೀರ್ಮಾನ ಕೈಗೊಳ್ಳಲು ಸಾ.ಮಾ.ಅ. ವಿಫಲನಾದಲ್ಲಿ ಸಾ.ಮಾ.ಅ., ಕೋರಿದೆಯನ್ನು ತಿರಸ್ಕರಿಸಿದ್ದಾನೆಂದು ಭಾವಿಸತಕ್ಕದ್ದು.
ಕಲಂ7(3) ಮಾಹಿತಿ ಶುಲ್ಕವನ್ನು ಲೆಕ್ಕಾಚಾರ ಮಾಡಿ ಲೆಕ್ಕಾಚಾರದೊಂದಿಗೆ ಅರ್ಜಿದಾರರಿಗೆ 30 ದಿನಗಳೊಳಗಾಗಿ ತಿಳಿಸುವುದು. ಮಾಹಿತಿ ಶುಲ್ಕ ಪ್ರತಿ ಪುಟ ಎ4 ಅಳತೆಗೆ ರೂ.2/-№ 4(1)(2) 4(1) (2) 1 0.1/-
007(4) ಅಂಗವಿಕಲರಿಗೆ ಮಾಹಿತಿ ಒದಗಿಸಲು ಸೂಕ್ತವಾದ ನೆರವು ನೀಡುವುದು.
6007(5) ತಹಸೀಲ್ದಾರರಿಂದ ಪಡೆದ ಬಡತನ ರೇಖೆಗಿಂತ ಕೆಳಗಿಸುವ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿ 100 ಪುಟಗಳ ವರೆಗೆ ಶುಲ್ಕ ವಿಧಿಸತಕ್ಕದ್ದಲ್ಲ.
6007(6)ನಿಗಧಿತ 30 ದಿನಗಳೊಳಗಾಗಿ ಮಾಹಿತಿ ಪೂರೈಸಲು ವಿಫಲನಾದಲ್ಲಿ, ತದನಂತರ ಪೂರ್ಣ ಮಾಹಿತಿಯನ್ನು ಉಚಿತವಾಗಿ ಪೂರೈಸತಕ್ಕದ್ದು.
ಕಲಂ7(7)11ನೇ ಪ್ರಕರಣದ ಅಡಿಯಲ್ಲಿ ಮೂರನೇ ವ್ಯಕ್ತಿಯು ಸಲ್ಲಿಸಿದ ಮನವಿಯನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು.
007(8)ಅರ್ಜಿಯನ್ನು ನಿರಾಕರಿಸಿದಲ್ಲಿ ಅರ್ಜಿದಾರರಿಗೆ ನಿರಾಕರಣೆಗೆ ಕಾರಣ, ಮೇಲ್ಮನವಿಯನ್ನು ಸಲ್ಲಿಸಲು ಇರುವ ಅವಧಿ,ಅಪೀಲು ಪ್ರಾಧಿಕಾರದ ವಿವರಗಳನ್ನು ತಿಳಿಸತಕ್ಕದ್ದು.
507(9)ಕೋರಿಸುವ ಮಾಹಿತಿ ಅಧಿಕವಾಗಿದ್ದಲ್ಲಿ ಕಡತ ತಪಾಸಣೆಗೆ ಸಮಯ ಹಾಗೂ ದಿನಾಂಕ ನಿಗಧಿಪಡಿಸಿ, ಮೊದಲ 1 ಗಂಟೆ ಉಚಿತ ಹಾಗೂ ನಂತರದ ಪ್ರತಿ ಅರ್ಧ ಗಂಟೆಗೆ ರೂ
.10/-ಗಳ ಶುಲ್ಕ ವಿಧಿಸಿ.ಕಡತ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು.
ಕೇಂದ್ರ ಸರ್ಕಾರದ ಇಲಾಖೆಗಳಿಗೂ ಒಂದೇ ಕ್ಯಾಲೆಂಡರ್ ಅನ್ವಯಿಸುತ್ತದೆ.
2025 ನೇ ವರ್ಷ ಪೂರ್ಣಗೊಳ್ಳಲು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕೇಂದ್ರ ಸರ್ಕಾರವು ಮುಂದಿನ ವರ್ಷ 2026 ನೇ ಸಾಲಿನ ಸಾರ್ವಜನಿಕ ರಜಾದಿನಗಳನ್ನು ಘೋಷಿಸಿದೆ. ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಗಳಿಗೂ ಒಂದೇ ಕ್ಯಾಲೆಂಡರ್ ಅನ್ವಯಿಸುತ್ತದೆ. ಗೆಜೆಟೆಡ್ ರಜಾದಿನಗಳು ಮೂಲಭೂತವಾಗಿ ಸಾರ್ವಜನಿಕ ರಜಾದಿನಗಳಾಗಿವೆ. ನಿರ್ಬಂಧಿತ ರಜೆ ನಿಯಮಗಳೊಂದಿಗೆ ಬರುತ್ತದೆ. ಇನ್ನೂ ಕೆಲ ಸಂಸ್ಥೆ ಮತ್ತು ರಾಜ್ಯದಿಂದ ಅವು ಬದಲಾಗುತ್ತವೆ. ಈ ರಜಾದಿನಗಳು ದೇಶದ ಎಲ್ಲಾ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಉದ್ಯೋಗಿಗಳಿಗೆ ಅನ್ವಯಿಸುತ್ತವೆ. ಇನ್ನೂ 2026 ರಲ್ಲಿ ಯಾವ ತಿಂಗಳಲ್ಲಿ ಎಷ್ಟು ದಿನ ರಜೆಗಳಿವೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು
ಜನವರಿ 1: ಹೊಸ ವರ್ಷ ದಿನ
ಜನವರಿ 3 - ಹಜರತ್ ಅಲಿಯವರ ಜನ್ಮದಿನ
ಜನವರಿ 14 - ಮಕರ ಸಂಕ್ರಾಂತಿ
ಜನವರಿ 23 - ಶ್ರೀ ಪಂಚಮಿ/ವಸಂತ ಪಂಚಮಿ
ಜನವರಿ 26 - ಗಣರಾಜ್ಯೋತ್ಸವ
ಫೆಬ್ರವರಿ 1 - ಗುರು ರವಿದಾಸ್ ಜಯಂತಿ
ಫೆಬ್ರವರಿ 12 - ಸ್ವಾಮಿ ದಯಾನಂದ ಸರಸ್ವತಿ ಅವರ ಜನ್ಮದಿನ
ಫೆಬ್ರವರಿ 15 - ಮಹಾಶಿವರಾತ್ರಿ
ಫೆಬ್ರವರಿ 19 - ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ
ಮಾರ್ಚ್ 3 - ಹೋಳಿಕಾ ದಹನ್/ಧೋಲ್ ಯಾತ್ರೆ
ಮಾರ್ಚ್ 4 - ಹೋಳಿ
ಮಾರ್ಚ್ 19 - ಚೈತ್ರ ಶುಕ್ಲಾಡಿ/ ಗುಡಿ ಪಾಡ್ವಾ/ ಯುಗಾದಿ
ಮಾರ್ಚ್ 20 - ಜುಮ್ಮಾ-ಉಲ್-ವಿದ: ರಂಜಾನ್‌ನ ಕೊನೆಯ ಶುಕ್ರವಾರ
ಮಾರ್ಚ್ 21 - ಈದ್-ಉಲ್-ಫಿತರ್
ಮಾರ್ಚ್ 26 - ರಾಮ ನವಮಿ
ಮಾರ್ಚ್ 31 - ಮಹಾವೀರ ಜಯಂತಿ
ಏಪ್ರಿಲ್ 3 - ಶುಭ ಶುಕ್ರವಾರ
ಏಪ್ರಿಲ್ 5 - ಈಸ್ಟರ್ ಭಾನುವಾರ
ಏಪ್ರಿಲ್ 14 - ವೈಶಾಖಿ/ ವಿಷು/ ತಮಿಳು ಹೊಸ ವರ್ಷ (ಮೇಷಾದಿ)
ಏಪ್ರಿಲ್ 15 - ವೈಶಾಖಿ (ಬಂಗಾಳ)/ ಬೊಹಾಗ್ ಬಿಹು (ಅಸ್ಸಾಂ)
ಮೇ 1 - ಬುದ್ಧ ಪೂರ್ಣಿಮೆ
ಮೇ 9 - ರವೀಂದ್ರನಾಥ ಟ್ಯಾಗೋರ್ ಜಯಂತಿ
ಮೇ 27 - ಬಕ್ರೀದ್ (ಈದ್-ಉಲ್-ಅಧಾ)
ಜೂನ್ 26 - ಮುಹರಂ
ಜುಲೈ 16 - ರಥಯಾತ್ರೆ: ಭಗವಾನ್ ಜಗನ್ನಾಥನ ಭವ್ಯ ಮೆರವಣಿಗೆಯ ದಿನ.
ಆಗಸ್ಟ್ 15 - ಸ್ವಾತಂತ್ರ್ಯ ದಿನ
ಆಗಸ್ಟ್ 15 - ಪಾರ್ಸಿ ಹೊಸ ವರ್ಷ (ನೌರೋಜ್)
ಆಗಸ್ಟ್ 26 - ಮಿಲಾದ್-ಉನ್-ನಬಿ / ಈದ್-ಎ-ಮಿಲಾದ್
ಆಗಸ್ಟ್ 26 - ಓಣಂ
ಆಗಸ್ಟ್ 28 - ರಕ್ಷಾ ಬಂಧನ
ಸೆಪ್ಟೆಂಬರ್ 4 - ಶ್ರೀಕೃಷ್ಣನ ಜನ್ಮಾಷ್ಟಮಿ
ಸೆಪ್ಟೆಂಬರ್ 14 - ಗಣೇಶ ಚತುರ್ಥಿ
2 ಅಕ್ಟೋಬರ್ - ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 18-20 - ದುರ್ಗಾ ಪೂಜೆ, ವಿಜಯದಶಮಿ
26 ಅಕ್ಟೋಬರ್ - ಮಹರ್ಷಿ ವಾಲ್ಮೀಕಿ ಜಯಂತಿ
29 ಅಕ್ಟೋಬರ್ - ಕರ್ವಾ ಚೌತ್
8 ನವೆಂಬರ್ - ದೀಪಾವಳಿ
9 ನವೆಂಬರ್ - ಗೋವರ್ಧನ ಪೂಜೆ
11 ನವೆಂಬರ್ - ಭಾಯಿ ದೂಜ್
15 ನವೆಂಬರ್ - ಛಠ್ ಪೂಜೆ
24 ನವೆಂಬರ್ - ಗುರುನಾನಕ್ ದೇವ್ ಜಯಂತಿ
24 ನವೆಂಬರ್ - ಗುರು ತೇಜ್ ಬಹದ್ದೂರ್ ಅವರ ಮರಣ ವಾರ್ಷಿಕೋತ್ಸವ
ಡಿಸೆಂಬರ್ 23 - ಹಜರತ್ ಅಲಿಯ ಜನ್ಮದಿನ (ಎರಡನೇ ದಿನಾಂಕದ ಪ್ರಕಾರ)
ಡಿಸೆಂಬರ್ 24 - ಕ್ರಿಸ್‌ಮಸ್ ಈವ್
ಡಿಸೆಂಬರ್ 25 - ಕ್ರಿಸ್‌ಮಸ್ ದಿನ
Thursday, November 20, 2025
Friday, October 10, 2025
ರಾಜ್ಯದಲ್ಲಿ `RTE' ಅಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ತಲಾ ವಾರ್ಷಿಕ ವೆಚ್ಚ ಮರು ನಿಗದಿಪಡಿಸಿ ಸರ್ಕಾರ ಆದೇಶ
ಶಾಲೆಯು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದ್ದರೆ, ಮೇಲಿನ ಅಗತ್ಯತೆಯು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅನ್ವಯಿಸುತ್ತದೆ.
ಕಾಯ್ದೆಯ ಸೆಕ್ಷನ್ 12(2)ರ ಅನುಸಾರ ಸರ್ಕಾರವು ಅಂತಹ ಶಾಲೆಗಳಿಗೆ ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚಕ್ಕೆ ಸೀಮಿತಗೊಳಿಸಿ, ಆಯಾ ಖಾಸಗಿ ಶಾಲೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ಮಾಡಿರುವ ವೆಚ್ಚ ಅಥವಾ ಆ ಶಾಲೆಯು ಪ್ರತಿ ವಿದ್ಯಾರ್ಥಿಗೆ ವಿಧಿಸುತ್ತಿರುವ ಶುಲ್ಕ ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನು ಮರುಪಾವತಿಸಬೇಕಿರುತ್ತದೆ. ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳ ಪ್ರಕಾರ ಸರ್ಕಾರವು ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೂ ಮುನ್ನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ತಲಾ ವೆಚ್ಚವನ್ನು ಅಧಿಸೂಚಿಸಬೇಕಿರುತ್ತದೆ.
ಮೇಲೆ ಓದಲಾದ (1)ರಲ್ಲಿನ ದಿನಾಂಕ:08.05.2012ರ ಸರ್ಕಾರದ ಆದೇಶದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮಾಡುತ್ತಿರುವ ವೆಚ್ಚವನ್ನು ತರಗತಿ 1 ಮತ್ತು ನಂತರದ ತರಗತಿಗಳಿಗೆ ರೂ.11848/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.5924/- ಎಂದು ಅಧಿಸೂಚಿಸಲಾಗಿದೆ.
ಮೇಲೆ ಓದಲಾದ (2)ರಲ್ಲಿನ ಸರ್ಕಾರದ ಆದೇಶಗಳಲ್ಲಿ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12(2) ಮತ್ತು ನಿಯಮ 8(1)ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು 2017-18, 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಇಪಿ 108 ಎಂ.ಹೆಚ್.ಟಿ 2020, ದಿನಾಂಕ:05.09.2020, ಸರ್ಕಾರದ ಆದೇಶ ಸಂಖ್ಯೆ: ಇಪಿ 50 ಎಂ.ಹೆಚ್.ಟಿ 2021, ದಿನಾಂಕ: 29.10.2021 ರಂತೆ 2020-21 ಮತ್ತು 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ.16,000/- ಎಂದು ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8000/- ಎಂದು ಪರಿಷ್ಕರಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ (3) ರಲ್ಲಿನ ಸರ್ಕಾರದ ಆದೇಶದಲ್ಲಿ, 2022-23ನೇ ಹಾಗೂ 2023-24ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.
ಮೇಲೆ ಓದಲಾದ (4) ರಲ್ಲಿನ ಸರ್ಕಾರದ ಆದೇಶದಲ್ಲಿ, 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರಾಥಮಿಕ ತರಗತಿಗಳಿಗೆ ರೂ. 16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ. 8000/- ಎಂದು ಆದೇಶಿಸಲಾಗಿದೆ.
ಮೇಲೆ ಓದಲಾದ (5)ರಲ್ಲಿನ ಪುಸ್ತಾವನೆಯಲ್ಲಿ, ಆರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ 8 ರಂತೆ ಪ್ರತಿ ವರ್ಷ ಸರ್ಕಾರದ ಹಂತದಲ್ಲಿ ಪ್ರತಿ ಮಗುವಿನ ತಲಾ ವೆಚ್ಚ ಘೋಷಣೆ ಆಗಬೇಕಿರುವುದಾಗಿ ತಿಳಿಸಿ, ಆರ್.ಟಿ.ಇ. ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ 2025-26ನೇ ಸಾಲಿನ ಶುಲ್ಕ ಮರುಪಾವತಿಯನ್ನು ಸಂಬಂಧಿಸಿದ ಖಾಸಗಿ ಅನುದಾನರಹಿತ ಪ್ರಾಥಮಿಕ ಶಾಲೆಗಳಿಗೆ ಸಂದಾಯಿಸಲು ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚ ಘೋಷಿಸುವಂತೆ ಸಹ ಪತ್ರದಲ್ಲಿ ಕೋರಿರುತ್ತಾರೆ.
ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಆರ್.ಟಿ.ಇ ಅಡಿ ಪ್ರವೇಶ ಪಡೆದು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲು, ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12(2) ಮತ್ತು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಯಮ.
8(1)ರಂತೆ ಸರ್ಕಾರದ ಶಾಲೆಗಳಲ್ಲಿ ಪ್ರವೇಶ ಪಡೆದ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚದನ್ವಯ 2025-26ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಪ್ರತಿ ಮಗುವಿನ ತಲಾ ವಾರ್ಷಿಕ ವೆಚ್ಚವನ್ನು ಪ್ರಾಥಮಿಕ ತರಗತಿಗಳಿಗೆ ರೂ.16,000/- ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ರೂ.8,000/-ಎಂದು ನಿಗದಿಪಡಿಸಿ ಆದೇಶಿಸಿದೆ.



Monday, August 18, 2025
Tally Prime Shortcut Keys
Computer learning shortcut key's
Hostel
ವಸತಿ ನಿಲಯಗಳ ದೈನಂದಿನ ಚಟುವಟಿಕೆಗಳು, ಆಹಾರ ಸರಬರಾಜು, ವಿದ್ಯಾರ್ಥಿಗಳ ಹಾಜರಾತಿ ಮತ್ತು ಇತರ ಮೂಲಸೌಕರ್ಯಗಳ ಮೇಲೆ ನಿಗಾ ಇಡಲು ಈ ರಿಜಿಸ್ಟರ್‌ಗಳು ಸಹಕಾರಿಯಾಗಲಿವೆ. ಜಿ...
-
height' 600px>



































































































