ಸಂಘಟನೆಯ ಶತಮಾನೋತ್ಸವದ ವರ್ಷಾಚರಣೆಯನ್ನು ಅವಿಸ್ಮರಣೀಯವಾಗಿಡಲು ಶತಮಾನೋತ್ಸವ ಭವನವನ್ನು ವಿನೂತನ ವಿನ್ಯಾಸ ಹಾಗೂ ಸೌಲಭ್ಯಗಳೊಂದಿಗೆ ಸಾಕಾರಗೊಳಿಸಿದ್ದಾರೆ. ಅಧ್ಯಕ್ಷರ ಈ ಕನಸು ನನಸಾಗಲು ಮುಕ್ತ ಮನಸ್ಸಿನಿಂದ ಅನುದಾನ ನೀಡಿ, ಆಶೀರ್ವದಿಸಿ ಈ ಕಾರ್ಯವನ್ನು ನಿಜವಾಗಲೂ ಸಾಧ್ಯವಾಗಿಸಿದವರು ಕರ್ನಾಟಕ ರಾಜ್ಯದ ಹೆಮ್ಮೆಯ ಜನನಾಯಕ, ನೌಕರ ಸ್ನೇಹಿ ಮನೋಭಾವದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು. ಈ ಭವನ ಅವರೀರ್ವರ ಸಮನ್ವಯದ ಸಂಕೇತವಾಗಿ, ನಾಡಿನ ನೌಕರರ ಹೆಮ್ಮೆಯಾಗಿ ರಾಜಧಾನಿಯ ಕೇಂದ್ರಸ್ಥಾನದಲ್ಲಿ ನೆಲೆನಿಂತಿದೆ. ಈ ಕಾರ್ಯದಲ್ಲಿ ಅನೇಕರು ಸಹಕರಿಸಿದ್ದು, ಅವರೆಲ್ಲರ ಶ್ರಮದ ಸಾರ್ಥಕತೆಯನ್ನು ಶತಶತಮಾನದವರೆಗೆ ಸಾಕ್ಷೀಕರಿಸಲಿದೆ..
No comments:
Post a Comment